Posts

ದೀಪಾವಳಿ ಶುಭಾಶಯಗಳು

Image
ಕಾವ್ಯ ಸಂಗಮದ ಎಲ್ಲ ಆತ್ಮೀಯ ಓದುಗರಿಗೆ ನನ್ನ ಆತ್ಮೀಯ ಶುಭಾಶಯಗಳು .

ನಿನ್ನ ಹೆಸರು

Image
ಬುಧವಾರ ೪ ಆಗಸ್ಟ್ ೨೦೧೦ ನಿನ್ನ ಹೆಸರು ಮುಂಜಾವಿನ ಮಂಜಿನ ಮೇಲಿಂದ ತೇಲಿ ಬರುವ ತಿಳಿಗಾಳಿಯಲ್ಲಿ ನಿನ್ನ ಹೆಸರು ; ನೀಲಿ ಆಕಾಶದಲ್ಲಿ ತೇಲಾಡುತ್ತ ಸಂಭ್ರಮಿಸುವ ಮೋಡಗಳ ಒಡಲ ತುಂಬೆಲ್ಲ ನಿನ್ನ ಹೆಸರು ; ಫಲವತ್ತತೆಗೊಂಡ ಮೋಡಗಳ ತೆಕ್ಕೆಯಿಂದ ಬಿಡಿಸಿಕೊಂಡು ಭುವಿಗೆ ದಾಂಗು ಡಿಯಿಡುವ ಹನಿ ಹನಿ ಮುತ್ತಿನ ಬಿಂದುಗಳಲ್ಲಿ ನಿನ್ನ ಹೆಸರು ; ನೀರ ಮುತ್ತಿನ ಹನಿಗಳ ಸ್ಪರ್ಶ ಸುಖದಿಂದ ಭೂತಾಯಿ ಒಡಲಲ್ಲಿ ಪಲ್ಲವಿಸುತ್ತ ಹೋಗುವ ಬೀಜ ಬೀಜಗಳಲ್ಲಿ ನಿನ್ನ ಹೆಸರು ; ಓಲಾಡುವ ಸಸಿಗಳಲ್ಲಿ , ತೊನೆದಾಡುವ ಬೆಳೆಗಳಲ್ಲಿ , ಭ್ರಂಗದ ಸಂಗೀತದಲ್ಲಿ ನಿನ್ನ ಹೆಸರು ; ಚಿಟ್ಟೆಗಳ ಚಂಚಲತೆಯಲ್ಲಿ ತರುಳತೆಗಳಲ್ಲಿ , ಹೂಗಿಡಗಳಲ್ಲಿ ಹೂಗಂಧ ಸೂಸಿ ಬರುವ ಗಾಳಿಯಲ್ಲಿ , ಬದುಕಿಗೆ ಮುನ್ನುಡಿ ಬರೆಯುವ , ವಿದಾಯ ಹೇಳುವ ಬೆಂಕಿಯ ನಾಲಿಗೆಯಲ್ಲಿ ನಿನ್ನ ಹೆಸರು ; ಬಯಲುದಾರಿಯಲ್ಲಿ , ಬಾನಂಚಿನಲ್ಲಿ ದಿಗಂತದ ವಿಸ್ಮಯದಲ್ಲಿ ನೋವು ನಲಿವು , ಏಳು ಬೀಳು ಸುಖ ದುಖಗಳಲ್ಲಿ ಅಳಿಸಲಾಗದ ಶಾಸನ ನಿನ್ನ ಹೆಸರು . * ಉಮಾತನಯರಾಜ ಹುಬ್ಬಳ್ಳಿ ೧೦ - ೦೭ - ೨೦೧೦

ಈ ಹುಡುಗಿಯರೆ ಹೀಗೆ

Image
ಬುಧವಾರ ೨ ಜೂನ್ ೨೦೧೦ ಈ ಹುಡುಗಿಯರೆ ಹೀಗೆ ಈ ಹುಡುಗಿಯರೆ ಹೀಗೆ ಹಾಗೆ ನಮಗೆ ಗೊತ್ತಿಲ್ಲದಂತೆ ಹೇಗೋ ನಮ್ಮ ಬದುಕಿನಲ್ಲಿ ಬರುತ್ತಾರೆ ನಮ್ಮ ಅನುಮತಿಯಿಲ್ಲದೆ ಎದೆಯೊಳಗೆ ನೂರೆಂಟು ಭಾವನೆಗಳಿಗೆ ನೀರೆರೆದು, ಬೆಳೆಸಿ ಪೋಷಿಸಿ ಅದು ಹೆಮ್ಮರವಾಗುವ ಹೊತ್ತಿಗೆ ತಟಕ್ ಅಂತ ಹೇಳ ಹೆಸರಿಲ್ಲದಂತೆ ಮಟಾ ಮಾಯವಾಗುತ್ತಾರೆ . * ಉಮಾತನಯರಾಜ ಹುಬ್ಬಳ್ಳಿ ೦೩.೦೬.೨೦೧೦ ಬೆಳಗಿನ ೦೭.೨೦

ಬೆಳಗಿನ ಹನಿಗಳು

Image
ಮಂಗಳವಾರ ೧ ಜೂನ್ ೨೦೧೦ ಬೆಳಗಿನ ಹನಿಗಳು ಬೀಳಲಿಲ್ಲ ಕನಸುಗಳು ನಿನ್ನ ಆಶಯದಂತೆ ನನಗೆ ಕನಸುಗಳೇ ಬೀಳಲಿಲ್ಲ; ಏಕೆಂದರೆ ನಿನ್ನ ನೆನಪಲ್ಲಿ ಇಡೀ ರಾತ್ರಿ ನಿದ್ದೆಯೇ ಬರಲಿಲ್ಲ. ****** ನಿರೀಕ್ಷೆ ಕಾಯುತ್ತಿದ್ದೇನೆ ನಾನು ನಿನಗಾಗಿ, ನಿನ್ನ ಸಂದೇಶಕ್ಕಾಗಿ ನಿನ್ನ ಒಲವಿನ ಸ್ಪರ್ಶಕ್ಕಾಗಿ ಒಂದೇ ಒಂದು ಸಿಹಿ ಸಿಂಚನಕ್ಕಾಗಿ. ****** ಬೆಳಗೇ ಇಲ್ಲ ಗೆಳತಿ, ನಿನ್ನ ಸಂದೇಶವಿಲ್ಲದ ನನಗೆ ಬೆಳಗೇ ಇಲ್ಲ, ರಾತ್ಫ್ರಿಗೆ ಅರ್ಥವೇ ಇಲ್ಲ, ನಿನ್ನ ಪ್ರೀತಿಯ ಸಿಂಚನವಿಲ್ಲದೆ ನನಗೆ ಬದುಕೇ ಇಲ್ಲ; ಏಕೆಂದರೆ ನನಗೆ ನೀನೆ ಎಲ್ಲ. * ರಾಜೇಂದ್ರ ಪಾಟೀಲ್ ( ಉಮಾತನಯರಾಜ) ಹುಬ್ಬಳ್ಳಿ ೦೨.೦೬.೨೦೧೦

ನಿನ್ನ ಹೊರತಾಗಿ

ಗೆಳತಿ ಮನೆಯಲ್ಲಿ ಯಾರೂ ಇಲ್ಲ ನನ್ನ ಹೊರತಾಗಿ; ನನ್ನೆದೆಯಲ್ಲಿ ಯಾರೂ ಇಲ್ಲ; ನಿನ್ನ ಹೊರತಾಗಿ * ಉಮಾತನಯರಾಜ ಹುಬ್ಬಳ್ಳಿ ೦೮.೦೪.೨೦೧೦ ಗುರುವಾರ

ಸಹನಾ ಭಟ್ ಗೆ ಆರ್ಯಭಟ ಗರಿ

ಸಿರಸಿಯ ನಾತ್ಯಾಂಜಲಿ ಕಲಾವಿದೆ ಸಹನಾ ಭಟ್ ರಿಗೆ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಅವರಿಗೆ ಕಾವ್ಯ ಸಂಗಮದ ಶುಭಾಶಯಗಳು. ಉಮಾತನಯರಾಜ ಹುಬ್ಬಳ್ಳಿ ೩೦.೦೩.೨೦೧೦